ಟಿಕೇಟ್ ಬುಕ್ ಮಾಡಿ

ಆನ್‌ಲೈನ್ ​​ಬುಕಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ವೈಲ್ಡರ್ನೆಸ್ ಪ್ರವಾಸೋದ್ಯಮ

ರಾಕ್ ಮತ್ತು ಪೂರ್ವ ಐತಿಹಾಸಿಕ ಉದ್ಯಾನ

ಬಿಬಿಪಿಯ ಪ್ರಕೃತಿ ಸುಂದರವಾದ ಕಲ್ಲಿನ ಹೊರಹರಿವು, ಆಳವಾದ ಕಣಿವೆಗಳು, ನೈಸರ್ಗಿಕ ಜಲಪಾತ ಮತ್ತು ಝರಿಗಳು ಮುಂತಾದ ಭೌಗೋಳಿಕ ರಚನೆಗಳಿಂದ ಕಣ್ಸೆಳೆಯುತ್ತದೆ. ಇಂತಹ ಭೌಗೋಳಿಕ ರಚನೆ ಮಿರ್ಜಾ ಹಿಲ್ ನಲ್ಲಿದೆ. ಇಲ್ಲಿ ಸ್ಟಿರಾಕೊಸಾರನ್, ಡಿಮೆಟ್ರೊಡನ್ ಮತ್ತು ಡೈನೊಸಾರ್ ಮುಂತಾದ ಪ್ರಾಣಿಗಳ ಮಾನವಗಾತ್ರದ ಮಾದರಿಯನ್ನು ಭಾರತದ ಜೀಯಾಲಾಜಿಕಲ್ ಸಮೀಕ್ಷೆ ನಿರ್ಮಿಸಿಕೊಟ್ಟಿದೆ. ಇದು ತನ್ನ ಅನನ್ಯ ಸೌಂದರ್ಯ ಮತ್ತು ಪ್ರಾಣಿ ಮಾದರಿಗಳಿಂದ ಯುವಜನತೆಯನ್ನು ಆಕರ್ಷಿಸುತ್ತದೆ. ಇಂತಹ ವಿನೂತನ ನಿರ್ಮಾಣಗಳು ಐತಿಹಾಸಿಕ ತಾಣವಾದ ಬಿಬಿಪಿಯನ್ನು ರಾಕ್ ಗಾರ್ಡನ್ ಆಗಿ ಪರಿವರ್ತಿಸಲು ಸಹಾಯಕವಾಗಿದೆ.

ಸುವರ್ಣಮುಖಿ ವೀಕ್ಷಣಾ ಗೋಪುರ

ಈ ವೀಕ್ಷಣಾಗೋಪುರ ಸುವರ್ಣಮುಖಿ ಫಾರೆಸ್ಟ್ ಗೆಸ್ಟ್ ಹೌಸ್ ನ ವಾಯುವ್ಯ ಭಾಗದಲ್ಲಿದೆ. ಈ ವೀಕ್ಷಣಾ ಗೋಪುರ ಇರುವ ಬೆಟ್ಟದಲ್ಲಿ ಯಾವಾಗಲೂ ಗಾಳಿಯ ವೇಗ ಬಹು ತೀವ್ರವಾಗಿರುತ್ತದೆ. ಇಲ್ಲಿ ಗಾಳಿಯ ವೇಗ ಎಷ್ಟಿರುತ್ತದೆ ಅಂದರೆ ಈ ಸ್ಥಳದಲ್ಲಿ ವಿಂಡ್ ಟರ್ಬೈನ್ ಗಳನ್ನು ನಿರ್ಮಿಸಿದರೆ ಬಿಬಿಪಿಗೆ ಬೇಕಾದ ವಿದ್ಯುತ್ ಅನ್ನು ಪೂರೈಸಬಹುದು ಎಂದು ಅಂದಾಜಿಸಲಾಗಿದೆ. ಸುವರ್ಣಮುಖಿ ವೀಕ್ಷಣಾ ಗೋಪುರದಿಂದ ನಾವು ಸಸ್ಯಾಹಾರಿ ಸಫಾರಿ, ಉದ್ಯಾನದ ವಿಸ್ತರಣಾ ಸ್ಥಳ, ಬಿಎಂಟಿಸಿ ಬಸ್ ನಿಲ್ದಾಣ, ಚಿಟ್ಟೆ ಉದ್ಯಾನ ಮತ್ತು ದಟ್ಟವಾದ ಸಸ್ಯಸಂಕುಲವನ್ನು ನೋಡಬಹುದು.

ಉಡಿಗೆ ಬಂಡೆ

ಬಹಳ ಹಿಂದೆ ಈ ಸ್ಥಳದಲ್ಲಿ ಮೃತ ದೇಹವನ್ನು ಪ್ರಾಣಿಗಳ ಆಹಾರಕ್ಕಾಗಿ ಇಡಲಾಗುತ್ತಿತ್ತು. ಹೀಗೆ ಮಾಡಿದರೆ ಆ ವ್ಯಕ್ತಿ ಎಲ್ಲ ಬಂಧನಗಳಿಂದ ಮುಕ್ತನಾಗಿ ನಿರ್ವಾಣ ಸ್ಥಿತಿ ತಲುಪುತ್ತಾನೆ ಎಂಬುದು ಆಗಿನವರ ನಂಬಿಕೆಯಾಗಿತ್ತು. ಉಡಿಗೆ ಬಂಡೆ ಗೋಪುರದಿಂದ ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ದಟ್ಟ ಅರಣ್ಯವನ್ನು ಕಾಣಬಹುದು. ಉಡಿಗೆ ಬಂಡೆಯ ಈಶಾನ್ಯ ಭಾಗದಲ್ಲಿ ಚಿಕ್ಕರಾಗಿಹಳ್ಳಿ ಬೆಟ್ಟವಿದೆ. ಇವೆರಡರ ಮಧ್ಯೆ ಆಳವಾದ ಕಣಿವೆ ಮತ್ತು ಆನೆ, ಗೌರ್, ಸಾಂಬಾರ್ಸ್, ಮಚ್ಚೆ ಜಿಂಕೆ ಮುಂತಾದ ಪ್ರಾಣಿಗಳ ಬಾಯಾರಿಕೆ ನೀಗಿಸುವ ಸಲುವಾಗಿ ಡ್ಯಾಮ್ ಕಟ್ಟಲಾಗಿದೆ.

ಹಜಾಮತಿ ಕಲ್ಲು

ಇದೊಂದು ಏಕಶಿಲೆಯ ಕಲ್ಲಾಗಿದ್ದು, ಪ್ರಾಚೀನ ಕಾಲದಲ್ಲಿ ಕ್ಷೌರಿಕರು ತಮ್ಮ ಬ್ಲೇಡುಗಳನ್ನು ಹರಿತಗೊಳಿಸಲು ಬಳಸುತ್ತಿದ್ದ ಕಲ್ಲಿನ ಆಕಾರ ಹೊಂದಿದೆ.

ಈ ಕಲ್ಲು ಇರುವ ಸ್ಥಳದಿಂದ ನಾವು ಬನ್ನೇರುಘಟ್ಟದ ರಮಣೀಯ ದೃಶ್ಯಗಳನ್ನು ನೋಡಬಹುದು. ಇಲ್ಲಿ ಆನೆಗಳು ರಾಜಾರೋಷವಾಗಿ ಓಡಾಡುತ್ತಿರುತ್ತವೆ.