ಮಂಗಳವಾರ ರಜೆ

ಪಶು ಪಾಲನೆ

ಆರೋಗ್ಯ ಮತ್ತು ನೈರ್ಮಲ್ಯ

ಉದ್ಯಾನವನವು ಆಧುನಿಕ ಆಸ್ಪತ್ರೆಯನ್ನು ಹೊಂದಿದ್ದು, ಇಲ್ಲಿ ಸಹಾಯಕ ನಿರ್ದೇಶಕ (ಪಶು ವೈದ್ಯಕೀಯ ಸೇವೆ), 2 ಪಶು ವೈದ್ಯರು, ಒಬ್ಬ ಜೀವ ಶಾಸ್ತ್ರಜ್ಞ ಹಾಗೂ 2 ಸಹಾಯಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಆಸ್ಪತ್ರೆಯು ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ - ರೇ ಸೌಲಭ್ಯ, ಒಳರೋಗಿ ಸೌಲಭ್ಯ, ಔಷಧ ಮತ್ತು ವೈದ್ಯಕೀಯ ಉಪಕರಣಗಳ ಕೇಂದ್ರವನ್ನು ಹೊಂದಿದೆ.

ಬಿಬಿಬಿಪಿಯಲ್ಲಿ WADDL (Washington Animal Disease Diagnostic Lab) ನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (Institute of Animal Health & Veterinary Biologicals) ವಿಭಾಗಗಳಿದ್ದು ವಿಜ್ಞಾನಿಗಳ ಹಾಗೂ ಪ್ರಯೋಗಾಲಯ ತಂತ್ರಜ್ಞರ ನೇತೃತ್ವ ಹೊಂದಿದೆ.

ಈ ಆಸ್ಪತ್ರೆಯ ಶವಾಗಾರದಲ್ಲಿ ಪ್ರಾಣಿಗಳ ಮರಣೋತ್ತರ ಪರೀಕ್ಷೆ ಮತ್ತು ರೋಗ ಪತ್ತೆ ಮಾಡಿ ಮರಣದ ಕಾರಣವನ್ನು ತಿಳಿದುಕೊಳ್ಳುತ್ತಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಸುಡುತ್ತಾರೆ. ಹೀಗೆ ಸುಡಲು ಅಪಾರ ಪ್ರಮಾಣದ ಕಟ್ಟಿಗೆ ಮತ್ತು ಕೂಲಿ ವ್ಯಯವಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು 200 ಕೆ.ಜಿ ಸಾಮರ್ಥ್ಯದ ಡೀಸೆಲ್ ಜನರೇಟರ್ ಚಾಲಿತ ಕುಲುಮೆ (incinerator)ಗಾಗಿ ಪ್ರಸ್ತಾಪಿಸಲಾಗಿದೆ.

ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಉಪಕರಣಗಳು:

ಪ್ರಾಣಿಗಳನ್ನು ನಿರ್ಬಂಧಿಸಲು ಲಭ್ಯವಿರುವ ಉಪಕರಣಗಳು: