ಸಂದರ್ಶಕರ ಸೌಲಭ್ಯಗಳು

ಬ್ಯಾಟರಿ ಆಪರೇಟೆಡ್ ವಾಹನ

ಬ್ಯಾಟರಿ ಆಪರೇಟೆಡ್ ವಾಹನ ಶೀಘ್ರದಲ್ಲಿ ಪ್ರಾರಂಭವಾಗಲಿದೆ.

ವಾಹನ ನಿಲುಗಡೆ ವ್ಯವಸ್ಥೆ

ಮೃಗಾಲಯ, ಸಫಾರಿ ಹಾಗೂ ಚಿಟ್ಟೆ ಉದ್ಯಾನಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆಂದೇ ಅತಿ ಕಡಿಮೆ ಶುಲ್ಕದ ಪಾರ್ಕಿಂಗ್ ವ್ಯವಸ್ಥೆಯನ್ನು ಅಂದಾಜು 0.02 ಹೆಕ್ಟೇರ್ ಪ್ರದೇಶದಲ್ಲಿ ಮಾಡಲಾಗಿದೆ. ನಾಲ್ಕು/ದ್ವಿಚಕ್ರ ವಾಹನಗಳ ನಿಲುಗಡೆಯ ಪ್ರದೇಶವು ಮುಖ್ಯದ್ವಾರದಿಂದ ಅನತಿ ದೂರದಲ್ಲಿದ್ದು ಸುಮಾರು ಎರಡೂವರೆ ಸಾವಿರ ವಾಹನಗಳ ನಿಲುಗಡೆಯ ವ್ಯವಸ್ಥೆಯನ್ನು ಹೊಂದಿದೆ.

ಕುಡಿಯುವ ನೀರು

ಉದ್ಯಾನವನದಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಇದರ ಹೊರತಾಗಿ ಉದ್ಯಾನವನದಲ್ಲಿರುವ ಅಂಗಡಿಗಳಲ್ಲೂ ನೀರಿನ ಬಾಟಲಿಗಳು ಸಿಗುತ್ತವೆ.

ಶೌಚಾಲಯ

ಒಟ್ಟಾರೆಯಾಗಿ 4 ಸುಲಭ ಶೌಚಾಲಯ ವ್ಯವಸ್ಥೆಗಳಿವೆ

  • ಮೃಗಾಲಯದ ಹೊರಗೆ – ವಾಹನ ನಿಲುಗಡೆಯ ಬಳಿ
  • ವಿಸ್ತರಣಾ ಪ್ರದೇಶದಲ್ಲಿರುವ ಹಿಲ್ ವ್ಯೂ ರೆಸ್ಟಾರೆಂಟ್ ಬಳಿ
  • ಉದ್ಯಾನವನದ ಘರಿಯಾಲ್ ಆವರಣದಲ್ಲಿ ಮತ್ತು ನಾಕ್ಟರಲ್ ಆವರಣದಲ್ಲಿ ಎರಡು ಘಟಕಗಳಿವೆ

ಶಿಶು ಆರೈಕೆ

ಸಫಾರಿಗಾಗಿ ಕಾಯುವ ಸ್ಥಳ ಹಾಗೂ ಬಿಳಿ ನವಿಲಿನ ಆವರಣದ ಸಮೀಪದಲ್ಲಿ ಎರಡು ಶಿಶು ಆರೈಕೆಯ ಘಟಕಗಳಿದ್ದು ಶಿಶುಗಳ ಡೈಪರ್ ಬದಲಾವಣೆ ಹಾಗೂ ಆಹಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ.

ಹುಲ್ಲು ಹಾಸು, ಕಾಲ್ಚೆಂಡು ಮತ್ತು ಪ್ಯಾರಗೋಲುಗಳು

ಇವುಗಳನ್ನು ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಸೂಕ್ತ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಹುಲ್ಲುಹಾಸು ಹಾಗೂ ಹೂವಿನ ಹಾಸಿನ ಮೇಲೆ ನಡೆಯುವುದನ್ನು ನಿಷೇಧಿಸಲಾಗಿದೆ.

ರೆಸ್ಟಾರೆಂಟ್ ಹಾಗೂ ಉಪಹಾರ ಗೃಹಗಳು

ಕರ್ನಾಟಕ ಸರ್ಕಾರದ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕರ್ನಾಟಕ ರಾಜ್ಯ ಪ್ರವಾಸ ಅಭಿವೃದ್ಧಿ ನಿಗಮವು ಉದ್ಯಾನದ ಪ್ರದೇಶಗಳಲ್ಲಿ ‘ಮಯೂರ ವನಶ್ರೀ’ ಎಂಬ ಉಪಹಾರ ಗೃಹವನ್ನು ನಡೆಸುತ್ತಿದೆ. ಇಲ್ಲಿ ಉದ್ಯಾನದ ಸಮಯದಲ್ಲಿ ತಿಂಡಿ, ಆಹಾರ, ಪಾನೀಯಗಳು ಲಭ್ಯವಿರುತ್ತವೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಲಿಮಿಟೆಡ್ ಗಳು ಕೂಡ ಮೃಗಾಲಯದ ಆವರಣದಲ್ಲಿ ಹಿಲ್ ವ್ಯೂ ಎಂಬ ರೆಸ್ಟೋರೆಂಟ್ ಅನ್ನು ನಡೆಸುತ್ತಿವೆ. ಪ್ರವಾಸಿಗಳು ಇಲ್ಲಿ ಊಟ-ಉಪಹಾರದ ವ್ಯವಸ್ಥೆಯನ್ನು ಹೊಂದಬಹುದಾಗಿದೆ. ಇಷ್ಟೇ ಅಲ್ಲದೇ ನಂದಿನಿ ಉತ್ಪನ್ನಗಳು ಸೇರಿದಂತೆ ಇನ್ನಿತರ ಆಹಾರೋತ್ಪನ್ನಗಳ ಮಳಿಗೆಗಳನ್ನು ಕೂಡ ಮೃಗಾಲಯದ ಆವರಣದಲ್ಲಿ ಕಾಣಬಹುದು.

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್

ನೇಚರ್ ಕ್ಯಾಂಪ್ ಅನ್ನು ನವೀಕರಿಸಿ ಬೆಡ್ ರೂಮ್ ಸೌಲಭ್ಯವಿರುವ ರೆಸಾರ್ಟ್ ಅನ್ನು ನಿರ್ಮಿಸುವುದರ ಮೂಲಕ 2002ರಲ್ಲಿ ಇದು ಬಿಬಿಪಿಗೆ ಪ್ರವೇಶಿಸಿತು. ಈ ಸೌಕರ್ಯ ಹೊರಾಂಗಣ ಸಭೆ ಮುಂತಾದವುಗಳನ್ನು ನಡೆಸಲು ಅನುಕೂಲಕಾರಿಯಾಗಿದೆ. ರೆಸಾರ್ಟ್ ಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ಸಫಾರಿಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ವನ್ಯಜೀವಿಗಳ ಬಗೆಗೆ ಉತ್ಸಾಹ ಉಳ್ಳವರು ರೆಸಾರ್ಟ್ ಗೆ ಭೇಟಿ ನೀಡಬಹುದು.

ಕರ್ನಾಟಕ ಜಂಗಲ್ ರೆಸಾರ್ಟ್ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ಉತ್ತಮ ಜಂಗಲ್ ರೆಸಾರ್ಟ್ ಎಂದು ಇದು ಗುರುತಿಸಿಕೊಂಡಿದೆ. ಜೆ ಎಲ್ ಆರ್ ಅಂತರಾಷ್ಟ್ರೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಬಿಬಿಪಿಯ ಪ್ರವಾಸಿಗರನ್ನು ಇಮ್ಮಡಿಗೊಳಿಸಿ, ಉದ್ಯಾನಕ್ಕೆ ಉತ್ತಮ ಲಾಭಾಂಶವನ್ನು ನೀಡುತ್ತಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

1997-1998ರ ಅವಧಿಯಲ್ಲಿ ಬಿ ಎನ್ ಪಿ ಆಳ್ವಿಕೆಗೆ ಒಳಪಟ್ಟಿದ್ದ ಉದ್ಯಾನವನವು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ನಿಯಮಿತ ಸಂಪನ್ಮೂಲಗಳನ್ನು ಬಳಸಿ ರಜಾ ಅವಧಿಗಳಲ್ಲಿ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಫಾರಿ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಯಿತು. ಆಗ ಮಧ್ಯ ಪ್ರವೇಶಿಸಿದ ರಾಜ್ಯ ಸರ್ಕಾರದ ಈ ಅಭಿವೃದ್ಧಿ ನಿಗಮವು ಉದ್ಯಾನದ ವಿಸ್ತರಣಾ ವ್ಯಾಪ್ತಿಯನ್ನು ಹೆಚ್ಚಿಸುವುದರ ಮೂಲಕ ಪ್ರವಾಸಿಗರ ಬೇಡಿಕೆಯನ್ನು ಪೂರೈಸುವಲ್ಲಿ ಯಶಸ್ವಿಯಾಯಿತು. ಎರಡು ಸಂಸ್ಥೆಗಳು ಒಪ್ಪಂದದ ಮೇರೆಗೆ ಆವರಣದಲ್ಲಿ ಸುಂದರ ರೆಸ್ಟಾರೆಂಟ್ ಗಳನ್ನು ನಿರ್ಮಿಸುತ್ತಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಬೆಂಗಳೂರಿನಲ್ಲಿರುವ ಈ ಉದ್ಯಾನವನವು ಎಲ್ಲ ಪ್ರಾಯೋಗಿಕ ಉದ್ದೇಶಗಳನ್ನು ಹೊಂದಿದೆ. ಉದ್ಯಾನವನದ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರು ಬೆಂಗಳೂರಿನವರೇ ಆಗಿದ್ದು ಬಹುಪಾಲು ಪ್ರವಾಸಿಗರು ಬೆಂಗಳೂರು ಮತ್ತು ಸುತ್ತಲಿನ ಪ್ರದೇಶದವರೇ ಆಗಿದ್ದಾರೆ. ಇವರೆಲ್ಲರ ಅನುಕೂಲಕ್ಕಾಗಿ ಬಿ ಎಮ್ ಟಿ ಸಿಯು ಉದ್ಯಾನದ ಆವರಣದ ಬಳಿ ಆಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಿ ನಿಯಮಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. 2011ರಲ್ಲಿ ಸುಮಾರು 2.0 ಎಕರೆ ಪ್ರದೇಶದಲ್ಲಿ ಸುಂದರ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಹಾಗೂ ಉದ್ಯಾನದ ಸಿಬ್ಬಂದಿಗೆ ಅನುಕೂಲವಾಗುವಂತೆ ಬೆಂಗಳೂರಿನ ಪ್ರಮುಖ ನಿಲ್ದಾಣಗಳಿಂದ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಇಂತಹ ವ್ಯವಸ್ಥೆಗಳು ಪ್ರವಾಸಿಗರನ್ನು ಇನ್ನಷ್ಟು ಸೆಳೆಯುವಂತೆ ಮಾಡಿದೆ.