ಬಿಬಿಬಿಪಿ ಎಂದೇ ಪ್ರಖ್ಯಾತವಾದ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅವಿಭಾಜ್ಯ ಅಂಗವಾಗಿದೆ. 2002 ರಲ್ಲಿ ಸ್ವತಂತ್ರವಾಗಿ ತಲೆ ಎತ್ತಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮೊದಲು 545.00 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿತ್ತು. ನಂತರದಲ್ಲಿ ಪರಿಸರ-ಮನರಂಜನೆ, ಪರಿಸರ-ಪ್ರವಾಸೋದ್ಯಮ ಮತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇದನ್ನು 731.88 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿ ಜೈವಿಕ ಉದ್ಯಾನವನವನ್ನಾಗಿ ರೂಪಿಸಲಾಗಿದೆ.

ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರಿನ ದಕ್ಷಿಣ ದಿಕ್ಕಿನಲ್ಲಿ ಸುಮಾರು 22 ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟ ಬೆಂಗಳೂರು ಜೈವಿಕ ಉದ್ಯಾನವನ ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ಪುನರ್ವಸತಿ ಕೇಂದ್ರ (Rescue Center) ಮುಂತಾದ ವಿಭಿನ್ನ ಘಟಕಗಳನ್ನು ಹೊಂದಿದೆ. ಇಂತಹ ಸಂರಕ್ಷಿತ ಅಭಯಾರಣ್ಯಗಳು ನಗರಕ್ಕೆ ತೀರ ಸಮೀಪದಲ್ಲಿರುವುದು ಜಗತ್ತಿನ ಕೆಲವೇ ಕೆಲವು ನಗರಗಳಲ್ಲಿ ಮಾತ್ರ.

ಸುದ್ಧಿ ಮತ್ತು ಘೋಷಣೆಗಳು

 • ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ
 • ಮೃಗಾಲಯ 31ನೇ ಡಿಸೆಂಬರ್ ತೆರೆದಿರುತ್ತದೆ.
 • ಬ್ಯಾಟರಿ ಆಪರೇಟೆಡ್ ವಾಹನ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
 • ಮೃಗಾಲಯ 25ನೇ ಡಿಸೆಂಬರ್ ತೆರೆದಿರುತ್ತದೆ. (ಕ್ರಿಸಮಾಸ್)
 • "ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನವು 12-06-2015 ರಿಂದ ಐಎಸ್ಓ 9001:2008 ಪ್ರಮಾಣಿತ ಸಂಸ್ಥೆಯಾಗಿದೆ."
 • ಬಿಬಿಬಿಪಿಯು ವಿದ್ಯಾರ್ಥಿಗಳಿಗಾಗಿ 'ವನ್ಯಜೀವಿ ಪರಿಚಯ ಮತ್ತು ಶೈಕ್ಷಣಿಕ ಕಾರ್ಯಕ್ರಮ' ಗಳನ್ನು ನಡೆಸುತ್ತದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು bannerghattazoo@gmail.com ಗೆ ಮೇಲ್ ಕಳುಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು
 • ಬಿಬಿಬಿಪಿಯು ಮೃಗಾಲಯದ ಆವರಣದಲ್ಲಿ ಹವಾನಿಯಂತ್ರಿತ 3ಡಿ ಆಡಿಟೋರಿಯಂ ನಿರ್ಮಿಸಿದೆ. ಇದರ ಮೂಲಕ ಪ್ರಕೃತಿ ಶಿಕ್ಷಣ, ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆಯ ಕುರಿತು ಮಾಹಿತಿ ನೀಡಲಾಗುತ್ತದೆ.
 • ಬಿಬಿಬಿಪಿಯು WAZA (World Association of Zoos and Aquariums) ಗುಂಪಿಗೆ ಸೇರಿದೆ
  ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 • ಬಿಬಿಬಿಪಿಯ ಆವರಣದಲ್ಲಿ ಬ್ಲ್ಯೂ ಗೋಲ್ಡ್ ಮಕಾವ್ಸ್ (ಒಂದು ಜಾತಿಯ ಗಿಳಿ), ಪಾಮ್ ಕೊಕಟೂ, ಎಲೆಕ್ಟಸ್ ಗಿಳಿ, ಸಲ್ಫರ್ ಕ್ರೆಸ್ಟೆಡ್ ಕೊಕಟೂ, ಸ್ಕಾರ್ಲೆಟ್ ಮ್ಯಾಕಾ, ಗಲೈ ಗಿಳಿ, ರೇನ್ಬೋ ಲೊರಿಕೇಟ್, ಕೆಂಪು ಲೊರಿಕೇಟ್, ಪಾರಿವಾಳ ಪಕ್ಷಿಗಳಿಗೆ ಆಶ್ರಯ ನೀಡಿದೆ.
 • ಝೂ ಸ್ಕ್ವೇರ್ನ ನಿರ್ಮಾಣದ ಉದ್ದೇಶಕ್ಕಾಗಿ ಸಾರ್ವಜನಿಕ ಅಭಿಪ್ರಾಯವನ್ನು ಬಿಬಿಬಿಪಿ ಬಯಸುತ್ತಿದೆ. ಅತ್ಯುತ್ತಮ ವಿನ್ಯಾಸಕ್ಕಾಗಿ ಮತ ಚಲಾಯಿಸಿ.
  ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸಕ್ತಿದಾಯಕ ಪ್ರವಾಸಿ ಸ್ಥಳಗಳು

ಪ್ರಶಂಸೆಗಳು :

ಜೈವಿಕ ಉದ್ಯಾನವನದಲ್ಲಿ ಅನುಸರಿಸಬೇಕಾದ ಕ್ರಮಗಳು

ಮೃಗಾಲಯದಲ್ಲಿ ಕಸವನ್ನು ಹಾಕುವುದು ಮತ್ತು ತೊಂದರೆಯುಂಟು ಮಾಡುವುದು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್, 1972 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ, ಆದ್ದರಿಂದ ದಯವಿಟ್ಟು ತಪ್ಪಿಸಿಕೊಳ್ಳಿ.

More

ಸಾಮಾಜಿಕ ಜಾಲ ತಾಣ