ಮಂಗಳವಾರ ರಜೆ

ಸಂರಕ್ಷಣಾ ಕೇಂದ್ರ

ರಾಷ್ಟ್ರೀಯ ಪ್ರಾಣಿ ಸಂರಕ್ಷಣೆ ನೀತಿ 1998 ರ ಪ್ರಕಾರ, ಎಲ್ಲ ಪ್ರಾಣಿಸಂಗ್ರಹಾಲಯಗಳು ಅನಾಥ ಕಾಡುಪ್ರಾಣಿಗಳ ಪಾರುಗಾಣಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಬಹುದು. ಇಂತಹ ಸಂಗ್ರಹಾಲಯಗಳು ಸೂಕ್ತ ವಸತಿ ಸೌಕರ್ಯಗಳನ್ನು ಕೂಡ ಹೊಂದಿರಬೇಕು ಎಂದು ಪ್ರಾಣಿ ಸಂರಕ್ಷಣಾ ನೀತಿ ಹೇಳುತ್ತದೆ. 1999ರಲ್ಲಿ ಈ ಹಿನ್ನಲೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರ (CZA) ವಿವಿದ ಸರ್ಕಸ್ಯಿಂದ ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪುನರ್ವಸತಿಗಾಗಿ ದೇಶದಾದ್ಯಂತ ನಿರ್ಮಿಸಿರುವ ಪುನರ್ವಸತಿ ಕೇಂದ್ರಗಳಲ್ಲಿ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರುವ ಪುನರ್ವಸತಿ ಕೇಂದ್ರವು ಒಂದಾಗಿರುತ್ತದೆ. ಇದು ಸುಮಾರು 17.50 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುತ್ತದೆ. ಸದರಿ ಪ್ರದೇಶವು ಸಾರ್ವಜನಿಕ ವೀಕ್ಷಣೆಗೆ ಅವಕಾಶವಿರುವುದಿಲ್ಲ.

ಈ ಸಂರಕ್ಷಣಾ ಕೇಂದ್ರ ಹುಲಿ ಮತ್ತು ಸಿಂಹಗಳನ್ನು ಹೊಂದಿದೆ. ಸಿಂಹದ ಬ್ಲಾಕ್ ಅನ್ನು ಎಲ್-ಬ್ಲಾಕ್ ಎಂದು ಕರೆಯಲಾಗುತ್ತದೆ. ಇದು ಒಟ್ಟೂ 12 ಮನೆಗಳನ್ನು ಹೊಂದಿದೆ. ಇದರಲ್ಲಿ 1500 ಸ್ವೇರ್ ಮೀಟರ್ ಉಳ್ಳ ದೊಡ್ಡಿಯನ್ನು ಹೊಂದಿರುವ 6 ಸಿಂಹದ ಪಂಜರಗಳಿವೆ. ಈ ಬ್ಲಾಕ್ ನಲ್ಲಿ ಒಟ್ಟೂ 72 ಸಿಂಹಗಳು ವಾಸಿಸಬಹುದು. ಸಿಂಹದ ಮನೆಗೆ ವಿರುದ್ಧ ದಿಕ್ಕಿನಲ್ಲಿ ಹುಲಿಗಳಿಗೆಂದು ಟಿ-ಬ್ಲಾಕ್ ನಿರ್ಮಿಸಿದ್ದಾರೆ. ಈ ಬ್ಲಾಕ್ ಗಾತ್ರದಲ್ಲಿ ಎಲ್-ಬ್ಲಾಕ್ ನ ಅರ್ಧದಷ್ಟಿದೆ. ಇದರಲ್ಲಿ 5 ಮನೆಗಳಿದ್ದು, 1500 ಸ್ವೇರ್ ಮೀಟರ್ ದೊಡ್ಡಿಯನ್ನು ಹೊಂದಿರುವ 6 ಪಂಜರಗಳಿವೆ. ಈ ಬ್ಲಾಕ್ ನಲ್ಲಿ ಒಟ್ಟೂ 30 ಹುಲಿಗಳು ವಾಸಿಸಬಹುದು. ಪ್ರಸ್ತುತ 14 (7 ಗಂಡು, 7 ಹೆಣ್ಣು) ಸಿಂಹಗಳನ್ನು ಕೆಲವು ಸರ್ಕಸ್ ಗಳಿಂದ ತರಲಾಗಿದೆ. ಇವುಗಳ ಹೊರ ತಾಗಿ ಕೆಲವು ವಯಸ್ಸಾದ ಪ್ರಾಣಿಗಳನ್ನು ವಿವಿಧ ಝೂ ಗಳಿಂದ ತಂದು ಇಲ್ಲಿ ಸಂರಕ್ಷಿಸಲಾಗುತ್ತಿದೆ.

ಉದ್ಯಾನದ ಇನ್ನುಳಿದ ಪ್ರದೇಶದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದೆ. ಈ ಪ್ರದೇಶದಲ್ಲಿ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸುತ್ತಲೂ ಆಳವಾದ ಕಂದಕ ಮತ್ತು ಸೋಲಾರ್ ಬೇಲಿಗಳನ್ನು ಹಾಕಲಾಗಿದೆ.

ವನ್ಯಜೀವಿ ಸಂರಕ್ಷಣೆಯಲ್ಲಿ ಭಾಗಿಯಾಗಿರುವ ಕೆಲವು ಸಂಘಟನೆಗಳು /span>

ವನ್ಯ ಜೀವಿ ಎಸ್ಓಎಸ್ - ಬನ್ನೇರುಘಟ್ಟ ಕರಡಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ (ಬಿ ಬಿ ಆರ್ ಸಿ)

ವನ್ಯಜೀವಿ ಎಸ್ಓಎಸ್ ದ ಅನುಮತಿಯ ಮೇರೆಗೆ ಪ್ರಸ್ತುತ 8 ಎಕರೆ ಜಾಗದಲ್ಲಿ ಕೆಲವು ಕರಡಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಮನುಷ್ಯರ ಪ್ರಭಾವ ಹೆಚ್ಚಿಗೆ ಉಳ್ಳ ಈ ಕುಣಿಯುವ ಕರಡಿಗಳನ್ನು ಖಲಂದರ್ ನಿಂದ ತರಲಾಗಿದೆ. ಕರ್ನಾಟಕ ಝೂ ಪ್ರಾಧಿಕಾರ ಮತ್ತು ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ, ವನ್ಯಜೀವಿ ಎಸ್ಓಎಸ್ ನ ಸಹಯೋಗದೊಂದಿಗೆ 2005ರಲ್ಲಿ ಎಮ್ಒಯು ಗೆ ಸಹಿ ಹಾಕಿತು. ಒಪ್ಪಂದದ ಪ್ರಕಾರ ಬನ್ನೇರುಘಟ್ಟ ಕರಡಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ (ಬಿ ಬಿ ಆರ್ ಸಿ)ವನ್ನು ಸ್ಥಾಪಿಸಲಾಯಿತು. ಈ ಯೋಜನೆಯಡಿ ಬಿ ಬಿ ಆರ್ ಸಿ ಯು 78 ಕರಡಿಗಳಿಗೆ ಪುನರ್ವಸತಿ ಕಲ್ಪಿಸಿದೆ. ವನ್ಯಜೀವಿ ಎಸ್ಓಎಸ್ 15 ಪೂರ್ಣಾವಧಿ ಸಿಬ್ಬಂದಿ ಮತ್ತು 2 ಪೂರ್ಣಾವಧಿ ಪಶು ಅಧಿಕಾರಿಗಳ ತಂಡವನ್ನು ನೀಡಿದೆ. ಪ್ರತಿಶತ 50 ರಷ್ಟು ಸಿಬ್ಬಂದಿಗಳು ಮೂಲತಃ ಕಲಂದರ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಬಿಬಿಆರ್ ಸಿಯು ಸಂರಕ್ಷಣೆಯ ಕೇಂದ್ರವಾಗಿದ್ದರೂ ಸಹ ಇದು ಸಾರ್ವಜನಿಕರಿಗೆ ಹೆಚ್ಚು ಪರಿಚಿತವಲ್ಲ.

ವನ್ಯಜೀವಿ ಎಸ್ಒಎಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ:-
ಡಾ. ಅರುನ್ ಎ ಶಾ,
ಹಿರಿಯ ಪಶುವೈದ್ಯ ಅಧಿಕಾರಿ ಮತ್ತು ಕೇಂದ್ರ ಉಸ್ತುವಾರಿ
ಫೋನ್ : +91 9980145785 ಅಥವಾ ಈ ಮೇಲ್ : arun@wildlifesos.org
ವೆಬ್ : www.wildlifesos.org

'ಬಾರ್ನ್ ಫ್ರೀ ಫೌಂಡೇಶನ್' ಎಂಬ ಜೀವಿತಾವಧಿ ಸೌಲಭ್ಯ :

ಯುರೋಪಿನ ಸರ್ಕಸ್ ಗಳಿಂದ ಬಿಡುಗಡೆ ಹೊಂದಿದ ಹಲವು ಹುಲಿಗಳು ಬಾರ್ನ್ ಫ್ರೀ ಫೌಂಡೇಶನ್ (ಬಿಇಎಫ್)ನಲ್ಲಿ ಆಶ್ರಯ ಪಡೆದಿವೆ. ಪ್ರಾಣಿಗಳ ಸಂರಕ್ಷಣೆಯ ಕೇಂದ್ರವಾಗಿರುವ ಬಿಇಎಫ್ ಸಾರ್ವಜನಿಕರಿಗೆ ಅಪರಿಚಿತ. ಪ್ರಸ್ತುತ ಇಲ್ಲಿ ಸುಮಾರು 14 ವರ್ಷದ ರಾಕ್ (ಗಂಡು ಸುಮಾತ್ರನ್) ಎನ್ನುವ ಹುಲಿಯಿದೆ. ಈಗ ಬಿಇಎಫ್ ಅನ್ನು ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ನಡೆಸುತ್ತಿದ್ದಾರೆ.

ಬನ್ನೇರುಘಟ್ಟ ಸಂರಕ್ಷಣಾ ಕೇಂದ್ರ

ಬೆಂಗಳೂರಿನ ಸುತ್ತ ಮುತ್ತಲ ಪ್ರದೇಶದಲ್ಲಿರುವ ಅನಾಥ ಪ್ರಾಣಿಗಳು CUPA (Compassion Unlimited Plus Action) ಕಾರ್ಯಕರ್ತರ ಮೂಲಕ ರಕ್ಷಿಸಿ ಬನ್ನೇರುಘಟ್ಟ ಸಂರಕ್ಷಣೆ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಯನ್ನು ಬನ್ನೇರುಘಟ್ಟ ಸಂರಕ್ಷಣೆ ಕೇಂದ್ರದಲ್ಲಿ ಮಾಡಲಾಗುತ್ತದೆ. 2001-02 ರಲ್ಲಿ ಬಿಬಿಪಿ ಮಂಜೂರು ಮಾಡಿದ ಬೈರಪ್ಪನಹಳ್ಳಿ ಸಮೀಪದ 2.93 ಹೆಕ್ಟೇರ್ ಪ್ರದೇಶದಲ್ಲಿ ಈ ಕೇಂದ್ರ ಸ್ಥಾಪಿತವಾಗಿದೆ. ಇದನ್ನು ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ (WRRC) ನಿರ್ವಹಿಸುತ್ತದೆ.